ಕುದುರೆಮುಖ 

ಮೈಸೂರು ರಾಜ್ಯದಲ್ಲಿ ಪಶ್ಚಿಮ ಘಟ್ಟಗಳ ಉನ್ನತ ಶಿಖರ. ಸಮುದ್ರಮಟ್ಟದಿಂದ 6,207' ಎತ್ತರದಲ್ಲಿರುವ ಈ ಶಿಖರ ಚಿಕ್ಕಮಗಳೂರು ಜಿಲ್ಲೆಯ ನೈಋತ್ಯ ಅಂಚಿನಲ್ಲಿ, ಘಟ್ಟದ ಸಾಲು ಒಳಕ್ಕೆ ಚಾಚಿಕೊಂಡಿರುವ ಎಡೆಯಲ್ಲಿದೆ. ಪಶ್ಚಿಮದಲ್ಲಿ ಸಮುದ್ರದ ಕಡೆಯಿಂದ ಇದು ಕುದುರೆಮುಖದಂತೆ ತೋರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ